ಬೆಟ್ಟದ ಮೇಲೊಂದು ಮನೆಯ ಮಾಡಿ…..

               ಮೊಬೈಲ್ನಲ್ಲಿ ಯಾವ್ದೋ ಹಾಡು ಕೇಳ್ತಾ ಇದ್ದೆ ಆದ್ರೆ ತಲೇಲಿ ಬೇರೆಯದೇ ಯೋಚನೆಗಳು!!ಕೆಲವೊಮ್ಮೆ ಒಬ್ಬಳೇ ವಾಕಿಂಗ್ ಹೋಗ್ತೀನಿ. ಹಾಗೆ ಹೋದಾಗ ಏಷ್ಟೋಂದ್ ಯೋಚನೆ ಮಾಡೋಕೆ ಟೈಮ್ ಸಿಗತ್ತೆ. ಇಲ್ಲಿರೋ ವಾಕಿಂಗ್ ಟ್ರಯಲ್ಸ್ ಹೇಗಿದೆ ಅಂದ್ರೆ , ದಿನ ಯಾವದಾದ್ರು ಹೊಸ ಟ್ರಯಲ್ಸ್ ನೋಡಬಹುದು ,explore ಮಾಡಬಹುದು . ಈ ಊರನ್ನು ಹತ್ತು ಸಾವಿರ ಸರೋವರಗಳ  ನಗರ ಅಂತ ಕರೀತಾರಂತೆ . ತುಂಬಾ correct ಆಗಿದೆ ಹೆಸರು ಅಂತ ನಂಗೆ ಅನ್ಸಿತ್ತು . ಎತ್ತ ನೋಡಿದರು ಕೆರೆಗಳು , ಕೆರೆಗಳಿಗೆ ಅಂಟಿಕೊಂಡಂತೆ beachಗಳು .ಒಂದೇ ಕೆರೆಗೆ 3-4 beachಗಳು.ಆಮೇಲೆ ಆ ಕೆರೆಗಳ ದಡಗಳಲ್ಲಿ ಸುಂದರವಾದ ಮನೆಗಳು . ಆ ಸೌಂದರ್ಯಕ್ಕೆ ಅಷ್ಟೇ ಬೆಲೆಯೂ ಕೂಡ ಅಂತೆ.

              ಹೀಗೆ ಒಂದಿನ ನಾನು walk ಮಾಡ್ಕೊಂಡು ಬರೋವಾಗ ಒಂದು ಗುಡ್ಡದ ಮೇಲೆ ಬಂಗಲೆಯಂತಹ ಒಂದ್ ಮನೆ ಕಾಣಿಸ್ತು .ನೋಡಿದ ತಕ್ಷಣ ಇಷ್ಟ ಆಗೋ ಅಂಥದ್ದು , ಕಣ್ಮನ ಸೆಳೆಯೋ ಅಂಥದ್ದು ಅಂತಾರಲ್ಲ ಆ ತರಹದ್ದು . ಅದನ್ನ ನೋಡಿ ನನ್ನ ತಲೆಗೆ ಬಂದಿದ್ದು ಒಂದು ವಚನ .ಅಕ್ಕಮಹಾದೇವಿಯವರದ್ದು. ಆ ಟೈಮೆಲ್ಲಿ ಅದು ವಚನನೋ , ಪದ್ಯನ ಅಥವಾ ಗಾದೆನ ಅಂತ ಗೊತಾಗ್ಲಿಲ್ಲ.ಅಷ್ಟೊಂದು ಯೋಚ್ನೆನು ಮಾಡ್ಲಿಲ್ಲ .ಸುಮ್ನೆ ಮನ್ಸಲ್ಲೇ ಆ ಹಾಡು ಹೇಳ್ಕೊಂಡು ಬಂದೆ. ಮನೆಗ್ ಬಂದ್  ತಕ್ಷಣ ಫಸ್ಟ್ ಮಾಡಿದ್ದು Google! ತಕ್ಷಣಕ್ಕೆ ಗೊತಾಗಿಬಿಡ್ತು .ಇದು High School ಕನ್ನಡ ಕ್ಲಾಸ್ನಲ್ಲಿ ಓದಿದ್ದು ಅಂತ .ತುಂಬಾ ಇಷ್ಟ ಆಗ್ತಿದ್ದ ಕ್ಲಾಸ್ ಅದು. ಏಷ್ಟೋಂದ್ peoms ಮತ್ತು ಕಥೆಗಳು ಇನ್ನು ನೆನಪಿದೆ.

ಅಮೇರಿಕಾಗೆ ಬಂದು ಒಂದ್ ವರ್ಷ ಆಗ್ತಾ ಬಂತು . ಏಷ್ಟೋಂದ್ ಹೊಸ ವಿಷಯಗಳನ್ನ ನೋಡಿದೀನಿ , ಕಲ್ತಿದೀನಿ , ಕಲಿತಾನು ಇದಿನಿ . ತುಂಬಾ ಕಷ್ಟ ಪಟ್ಟು “water” ಅನ್ನ “ವಾಡರ್” ಅಂತ ಅನ್ನೋಕೆ ಕಲ್ತಿದೀನಿ. ಆದರು ಏಷ್ಟೋಂದ್ ಸಲ ವಾಟರ್ ಅಂತಾನೆ ಬರತ್ತೆ . ಅಂಗಡಿಯವನು ಮತ್ತೆ “ವಾಡರ್ ??” ಅಂತ ಕೇಳ್ದಾಗ , ಓ ಇವ್ನು ನಾನು ತಪ್ಪು ಹೇಳಿದೆ ಅಂತ ಸರಿ ಮಾಡ್ತಿದ್ದಾನೇನೋ ಅನ್ಸತ್ತೆ . Aiyoo ಹೌದಪ್ಪ ಅದನ್ನೇ ಕೊಡು ಅಂತ ಮನ್ಸಲ್ಲೇ ಏಷ್ಟೋಂದ್ ಸಲ ಅನ್ಕೊಂಡಿದೀನಿ. ವಾಡರ್ ತರದ್ದು ತುಂಬಾ ವಿಷಯಗಳಿವೆ . ಎಲ್ಲವನ್ನು ನೋಡಿ ಏನನ್ನಿಸತ್ತೆ ಅಂದ್ರೆ , ನಮ್ಮ ಊರು , ನಮ್ಮ ಜನ , ನಮ್ಮ ಭಾಷೆ ಎಲ್ಲರಿಂದ , ಎಲ್ಲದರಿಂದ ಇಷ್ಟು ದೂರ ಬಂದು ನಮ್ಮದೇ ಒಂದು ಚಿಕ್ಕ ಪ್ರಪಂಚವನ್ನ ಕಟ್ಟಿಕೊಂಡು , ಇಲ್ಲಿನ ಜನರ ಭಾಷೆ , ನಡೆ ನುಡಿ ಎಲ್ಲದಕ್ಕೂ ಹೊಂದಿಕೊಂಡು ಹೊಗುತ್ತಿದ್ದರೂ , ಎಲ್ಲೊ ಒಂದು ಕಡೆ ಬೆಟ್ಟದ ಮೇಲಿನ ಮನೆಯ ರೀತಿಯ ವಿಚಾರಗಳು ನಮ್ಮ ಮೂಲವನ್ನ ನೆನಪಿಸತ್ತೆ , ನೆನಪಿಸ್ತಾನೆ ಇರತ್ತೆ.

ಈ ಹಾಡು ಬರಿ ಒಂದು ಚಿತ್ರ ಆಗಿ ನನ್ನ ಕಣ್ಣ ಮುಂದೆ ಬರಲಿಲ್ಲ . ಒಳಗೆ ತುಂಬಾ ದೊಡ್ಡ ಭಾವಾರ್ಥನೇ ತುಂಬಿದೆ. ಒಂದೊಂದಾಗಿ ಅರ್ಥ ಮಾಡಿಕೊಳ್ತಾ ಎಷ್ಟು ಸಮಂಜಸವಾಗಿದೆ ಅನ್ನಿಸ್ತು . ಪದ್ಯದ ಮೊದಲನೇ ಸಾಲು ನೆನಪಾಗಿದ್ದೇ  ತುಂಬಾ ಖುಷಿ ಆಗಿತ್ತು. ಆದ್ರೆ complete ಆಗಿ ಪದ್ಯ ಓದಿದಮೇಲೆ ಅದರ ಭಾವಾರ್ಥ ಕೂಡ ಎಷ್ಟು ಚೆನ್ನಾಗಿದೆ ಮತ್ತು ಅದು ನನಗೆ ಹೇಗೆ relate ಆಗತ್ತೆ ಅಂತಾನೂ ನೋಡಿ ಆಶ್ಚರ್ಯ  ಆಯಿತು.

               ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ?

               ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ?
               ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ?
               ಚೆನ್ನಮಲ್ಲಿಕಾಜುನದೇವ ಕೇಳಯ್ಯ
               ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ
               ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು

                  ತುಂಬಾ ಅದ್ಬುತವಾದ 3 ಉದಾಹರಣೆಗಳ ಮೂಲಕ , ಹೇಗೆ ನಾವು ಜೀವನದಲ್ಲಿ ಯಾವುದೇ ಕಷ್ಟ / ಸಾವಾಲುಗಳು ಬಂದರೆ ಹೆದರದೆ , ಕೋಪವನ್ನು ತೋರಿಸದೆ ಶಾಂತಿಯಿಂದ ಎಲ್ಲವನ್ನು ಎದುರಿಸಬೇಕು ಅಂತ ವಿವರಿಸಿದ್ದಾರೆ .ಹೊಗಳಿಕೆ , ತೆಗಳಿಕೆಗಳು ಜೀವನದಲ್ಲಿ ತುಂಬಾ ಸಹಜ . ಯಾವುದೇ ಬಂದರೂ  ಬ್ಯಾಲೆನ್ಸ್ ಕಾಪಾಡಿಕೋಬೇಕು  . ನಾವೇ ಮಾಡ್ಕೊಡಿರೋ ತೀರ್ಮಾನಗಳು  , ಹಾಗಾಗಿ ನಾವೇ ಅಡ್ಜಸ್ಟ್ ಮಾಡ್ಕೋಬೇಕು . ಒಂದಿನ ಮನೆ ನೆನಪಾಗತ್ತೆ , ಇನ್ನೊಂದಿನ ಅಪ್ಪ ಅಮ್ಮನ miss ಮಾಡ್ಕೋತೀವಿ , ಇನ್ನೊಂದಿನ  ಊರು ನೆನಪಾಗತ್ತೆ , ಬೇರೆ ದೇಶಕ್ಕೆ ಬಂದು ಹೊರಗಿನವರು ಅಂತ ಅನ್ನಿಸೋಕೆ  ಶುರು ಆಗತ್ತೆ . ಆದ್ರೆ ಅವೆಲ್ಲನ್ನೂ ಮೀರಿ ನಿಮ್ಮದೇ ಒಂದು ಆಸೆ ಇರುತ್ತೆ , ಗುರಿ ಇರತ್ತೆ ಅದನ್ನ ಸಾದಿಸೋಕೆ ನೀವು ಇಲ್ಲಿ ಇರಲೇಬೇಕು ಅನ್ಸತ್ತೆ . ಅವತ್ತು ನಾವು ಖುಷಿ ಆಗಿರ್ತಿವಿ. ಜೀವನ ಎಷ್ಟು ಚೆನಾಗಿದೆ ಅನ್ನಿಸೋಕೆ ಶುರುಆಗತ್ತೆ . ಆ ತರಹದ ಎಷ್ಟೋ ಖುಷಿಯ ದಿನಗಳಿಗಾಗಿ ಕಾಯುತ್ತ ….. 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Powered by WordPress.com.

Up ↑

%d bloggers like this: